Search
  • All Search Results
  • Books
  • Users
  • Groups
  • FAQs

nanna highschool dinagalu

My High-School Days By:
nanna highschool dinagalu
ಸುರಾನ ಕಾಲೇಜು ಗ್ರಂಥಪಾಲಕನಾಗಿದ್ದುಕೊಂಡು ಸಾಹಿತ್ಯ-ಸಂಶೋಧನೆ ಎಂದು ತಲೆಕೆಡಿಸಿಕೊಂಡಿರುವ ಗೆಳೆಯ ಸತ್ಯ, ’ನನ್ನ ಹೈಸ್ಕೂಲು ದಿನಗಳ ಬಗ್ಗೆ ಬರೆಯುತ್ತಿದ್ದೇನೆ’ ಎಂದಾಗ ಆಶ್ಚಯವಾಗಲಿಲ್ಲ; ಒಳ್ಳೆಯ ಪ್ರಯತ್ನ ಅನ್ನಿಸಿತ್ತು. ಈ ಹಿಂದೆ, ಕಥೆಗಾರ ಸತ್ಯ ನನ್ನ ಮಟ್ಟಿಗೆ ನೇರ ಬರಹಗಾರನಾಗಿ ಕಾಣಿಸಿದ್ದ. ಆದ್ದರಿಂದ ಅವನಿಗಿಂತಲೂ ಹೆಚ್ಚಿನ ನಿರೀಕ್ಷೆ ನನಗಿತ್ತು. ಅದರಂತೆ ಒಂದೇ ’ಸಿಟ್ಟಿಂಗ್’ನಲ್ಲಿ ಓದಿಸಿಕೊಂಡು ಹೋಗುವ ’ನನ್ನ ಹೈಸ್ಕೂಲು ದಿನಗಳು’ ಕೃತಿ ಸಿದ್ಧವಾಗಿದೆ.
ಎಲ್ಲರಂತೆ ವಂiಸಹಜವಾದ ತುಂಟತನದಲ್ಲೇ ಹೈಸ್ಕೂಲು ವಿಧ್ಯಾಭ್ಯಾಸವನ್ನು ನಡೆಸಿದ ಸತ್ಯ, ಎಲ್ಲಾ ಘಟನೆಗಳನ್ನು ಎಳೆಎಳೆಯಗಿ ಬಿಡಿಸಿದ್ದಾನೆ. ಪುಸ್ತಕವಾಗುತ್ತಿದೆ ಅನ್ನುವ ಶಿಷ್ಟಾಚಾರಕ್ಕೆ ಯವುದನ್ನೂ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಶಾಲೆಯಲ್ಲಿ ನಡೆಯವ ಅವಾಂತರಗಳು, ಮನುಷ್ಯತ್ವವನ್ನು ಮರೆತ ಮತ್ತು ಮನುಷ್ಯತ್ವದ ಪ್ರತಿರೂಪವೇ ಆದ ಮೇಷ್ಟ್ರುಗಳು, ಮೂಲಭೂತ ಸೌಲಭ್ಯಗಳಿಲ್ಲದ ಶಾಲೆಗಳು, ಒಂದೋ-ಎರಡೋ ವಿದ್ಯಾರ್ಥಿಗಳು ಪಾಸಾಗುವ ಪರಿಸ್ಥಿತಿ (ಹತ್ತನೇ ತರಗತಿಯ ತನ್ನ ಬ್ಯಾಚಿನಲ್ಲಿ ಪಾಸಾಗಿದ್ದು ಸತ್ಯ ಒಬ್ಬನೇ!) ಗೆಳೆಯರ ಗುಂಪು-ಗುಂಪುಗಾರಿಕೆ, ತೋಟ-ತುಡಿಕೆಗಳಲ್ಲಿ, ಹಾಸ್ಟೆಲ್‌ನಲ್ಲಿ ಕಳ್ಳತನ, ಸಹಿಯನ್ನು ಫೋರ್ಜರಿ ಮಾಡುವ ಎದೆಗಾರಿಕೆ, ಹಾಸ್ಟೆಲ್ ವಾಸ, ಅಲ್ಲಿನ ಅವ್ಯವಸ್ಥೆ ವಿದ್ಯಾರ್ಥಿಗಳನ್ನು ಕೆಲಸಕ್ಕೆ ಬಳಸಿಕೊಳ್ಳುವ ರೀತಿ ಎಲ್ಲವನ್ನೂ ಸತ್ಯ ಕಣ್ಣಿಗೆ ಕಟ್ಟುವಹಾಗೆ ಚಿತ್ರಿಸಿದ್ದಾನೆ. ಇಂಗ್ಲಿಷ್ ಪಾಠಮಾಡುವ ಮೇಷ್ಟ್ರು ’ಕಾರ್ಪೋರೇಷನ್’ ಪದವನ್ನು ಉಚ್ಛರಿಸಲು ಬರದೆ, ಅದನ್ನು ಸಿ.ಒ.ಆರ್.ಪಿ.ಒ.ರೇಷನ್ ಎಂದು ಉಚ್ಛರಿಸುತ್ತಿದ್ದರು ಎಂಬುದನ್ನು ತಮಾಷೆಯ ದನಿಯಲ್ಲಿ ಬರೆಯಲಾಗಿದ್ದರೂ, ಅದರ ಹಿಂದಿನ ವಿಷಾದ ನಮಗೆ ತಟ್ಟುತ್ತದೆ. ಅಂತಹ ಪರಿಸರದಿಂದ ಬಂದರೂ ಒಂದು ಬ್ಯಾಚುಲರ್ ಮತ್ತು ಎರಡು ಸ್ನಾತಕೋತ್ತರ ಪದವಿಗಳ ಜೊತೆಗೆ ಒಂದು ಪಿಹೆಚ್.ಡಿ ಪದವಿ ಪಡೆದ ಸತ್ಯನ ಬಗ್ಗೆ ನನಗಂತೂ
ಮನಸ್ಸು ತುಂಬಿದ ಅಭಿಮಾನ. ಜೊತೆಗೆ ಅಂತಹ ಪರಿಸರದಲ್ಲಿ ಓದಿದ ಎಷ್ಟು ವಿದ್ಯಾರ್ಥಿಗಳು ಈ ಹಂತ ತಲುಪಲು ಸಾಧ್ಯ? ಅನ್ನುವ ಪ್ರಶ್ನೆ.
ಒಬ್ಬ ವಿದ್ಯಾರ್ಥಿಯ ಅನುಭವವಾದರೂ, ಈ ಪುಸ್ತಕ ಗ್ರಾಮೀಣ ಪ್ರದೇಶದ ಶಾಲೆಗಳ ಅವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಜೊತೆಗೆ, ಅನುಭವ ಅನುಭವಿಸಿದವರ ಸ್ವತ್ತು ಮಾತ್ರವಲ್ಲ; ಅದು ಸಮಾಜಕ್ಕೆ ರವಾನೆಯಗುವುದರ ಮೂಲಕ ಜನರನ್ನು ಚಿಂತನೆಗೆ ಹಚ್ಚಬೇಕು ಎನ್ನುವ ಸಂದೇಶವನ್ನೂ ಈ ಪುಸ್ತಕ ನೀಡುತ್ತದೆ. ಇದೊಂದು ಸ್ವೀಕರಿಸಬಹುದಾದ ಪ್ರಯತ್ನ ಎನ್ನುವುದು ನನ್ನ ಪ್ರಾಮಾಣಿಕ ಅಸಿಕೆ.

This eBook is available at the following stores (among others):

and in many other eBook-stores

$1.49
Posts and Comments
Top of page
No Thumbnail Remove bf832c4f8e8cd35_1407143592.7332580090 978-3-7368-2989-3 Please choose a reason Please enter the place in the book. en en_US